ಗ್ರಾಮೀಣ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಸರ್ಕಾರಿ ಬಸ್ಸು ಬೇಕು.

 ೨೦೨೩ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿದ್ದರು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಗ್ಯಾರಂಟಿಗಳನ್ನು ಶೀಘ್ರ ಜಾರಿಗೊಳಿಸಲು ಡಿಮ್ಯಾಂಡ್ ಮಾಡುತ್ತಿದ್ದರು ನಮ್ಮ ಕರ್ನಾಟಕದ ಜನತೆ. ಮಹಿಳೆಯರು ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ ಯಾವಾಗ ಎಂದು ಡಿಮ್ಯಾಂಡ್ ಮಾಡ ತೊಡಗಿದರು. ತನ್ನ ಪ್ರಣಾಳಿಕೆಯ ಪ್ರಕಾರ ಸರ್ಕಾರ ತನ್ನ ಪಂಚ ಗ್ಯಾರಂಟಿಗಳಲ್ಲಿ ಮೊದಲನೆಯದಾಗಿ, ಕರ್ನಾಟಕದ ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಜಾರಿಗೊಳಿಸಿತ್ತು. ಕೆಲಸಕ್ಕೆ ಹೋಗುವ ಮಹಿಳೆಯರಲ್ಲಿ ಸ್ವಲ್ಪ ದುಡ್ಡು ಉಳಿಸಬಹುದಲ್ಲ ಎಂಬ ಸಂತೋಷ, ಜೀವನ ಪೂರ್ತಿ ತನ್ನ ಕುಟುಂಬಕ್ಕಾಗಿ ದುಡಿದ ಮಹಿಳೆಯರಲ್ಲಿ ನಾವು ಕೂಡ ಪುಣ್ಯ ಕ್ಷೇತ್ರಗಳಿಗೆ ಹೋಗುವ ಸಮಯ ಬಂದಿದೆ ಎಂಬ ಖುಷಿ. ಕೆಲವು ಮಹಿಳಾ ಗುಂಪುಗಳು ಸಭೆ ಮಾಡಿ ಕರ್ನಾಟಕದ ಸುತ್ತ ಪ್ರವಾಸ ಮಾಡೋಣ ಎಂದು ತೀರ್ಮಾನ ತೆಗೆದುಕೊಂಡರು.

 

ಸರ್ಕಾರ ಈ ಯೋಜನೆ ಜಾರಿಗೊಳಿಸಿದ ನಂತರ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯವನ್ನು ಹೆಚ್ಚಾಗಿ ಬಳಸಿಕೊಂಡರು. ನಮ್ಮ ಎಷ್ಟೋ ಗ್ರಾಮೀಣ ಭಾಗದ ಮಹಿಳೆಯರಿಗೆ ಈ ಯೋಜನೆ ತಲುಪಿಲ್ಲ. ಗ್ರಾಮೀಣ ಭಾಗದಲ್ಲಿ ನಾವು ಹೆಚ್ಚಾಗಿ ಸರ್ಕಾರಿ ಬಸ್ಸುಗಳನ್ನು ನೋಡಲು ಸಾಧ್ಯವಿಲ್ಲ. ಅಧಿಕಾರಿಗಳಿಗೆ ಮನವಿ ಮಾಡಿದರು ಯವುದು ಓಂದು ಕಾರಣ ನೀಡಿ ಬಸ್ಸುಗಳನ್ನ ಬೀಡುವುದಿಲ್ಲ. ಉಚಿತ ಬಸ್ ಜಾರಿಯಾದ ಮೇಲೆ ಖಾಸಗಿ ಬಸ್ಸುಗಳ  ಡಿಮ್ಯಾಂಡ್ ಕಡಿಮೆಯಾಯಿತು. ಹಿಂದೆ, ಈ ಮಹಿಳೆಯರು ಖಾಸಗಿ ಬಸ್ಸುಗಳಲ್ಲಿ ಪ್ರಯಾಣ ಮಾಡುತ್ತಿದ್ದರು, ಕಾರಣ ಪ್ರಯಾಣ ವೆಚ್ಚ ಕಡಿಮೆ. ಹಿಂದೆ ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ಅಷ್ಟಾಗಿ ಪ್ರಯಾಣ ಮಾಡುತ್ತಿರಲ್ಲಿಲ್ಲ. ಸರ್ಕಾರಿ ಬಸ್ಸು ಇದ್ದರೂ ಖಾಸಗಿ ಬಸ್ಸುಗಳಿಗೆ ಕಾದು ಹೋಗುತ್ತಿದ್ದರು. ಈಗ ಅದು ಉಲ್ಟಾ, ಖಾಸಗಿ ಬಸ್ಸು ನಿಲ್ದಾಣಗಳಲ್ಲಿ ನಿಲ್ಲಿಸಿದ್ದರೂ ಅದರ ಕಡೆ ಅಷ್ಟಾಗಿ ಗಮನ ಹರಿಸದೆ ಸರ್ಕಾರಿ ಬಸ್ಸುಗಳಿಗೆ ಕಾದು ಹೋಗುತ್ತಿದ್ದಾರೆ. ಕಾರಣ ಇಷ್ಟೆ ನಮ್ಮ ಮಹಿಳೆಯರು ತನ್ನ ಕುಟುಂಬಕ್ಕಾಗಿ ತಮ್ಮ ಖರ್ಚುಗಳನ್ನು ಆದಷ್ಟು ಕಡಿಮೆ ಮಾಡ ಬಯಸುತ್ತಾರೆ.

 

ಈಗ ಸರ್ಕಾರಿ ಬಸ್ಸುಗಳಿಗೆ ಡಿಮ್ಯಾಂಡ್ ಸಾಕಷ್ಟು ಹೆಚ್ಚಾಗಿದೆ ಅದರಲ್ಲೂ ಪುಣ್ಯ ಕ್ಷೇತ್ರಗಳಿಗೆ ತೆರೆಳುವ ಬಸ್ಸುಗಳಿಗೆ. ಮಹಿಳೆಯರು ಕರ್ನಾಟಕದಲ್ಲಿರುವ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಸರ್ಕಾರದ ಈ ಯೋಜನೆ ಬಹಳಷ್ಟು ಮಹಿಳೆಯರಿಗೆ ಉಪಯೋಗ ಆಗಬಹುದು. ಇದರಲ್ಲಿ ಎಷ್ಟು ಉಪಯೋಗ ಇದೆಯೋ ಸ್ವಲ್ಪ  ಸಮಸ್ಯೆಗಳು ಇದೆ. ಬಹಳ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಬಸ್ಸುಗಳು ತನ್ನ ಮೊದಲ ನಿಲ್ದಾಣಗಳಲ್ಲಿ ಭರ್ತಿಯಾಗಿ ಬರುತ್ತಿದೆ. ತದನಂತರ ಬರುವ ನಿಲ್ದಾಣಗಳಲ್ಲಿ ಬಸ್ಸುಗಳನ್ನು ನಿಲ್ಲಿಸದೇ ಹೋಗುವ ಪರಿಸ್ಥಿತಿ ಬಂದಿದೆ. ಸರ್ಕಾರ ಡಿಮ್ಯಾಂಡ್ ತಕ್ಕಂತೆ ಬಸ್ಸುಗಳ ಸಂಖ್ಯೆ ಹೆಚ್ಚಿಸದೆ ಈ ಯೋಜನೆ ಜಾರಿಗೊಳಿಸಿರುವುದು ತೊಂದರೆಗಳಿಗೆ ಜಾಗ ಮಾಡಿಕೊಡುತ್ತಿದೆ. ಇನ್ನು ಎಷ್ಟೂ ಗ್ರಾಮಗಳಿಗೆ ಸರ್ಕಾರಿ ಬಸ್ಸುಗಳ ವ್ಯವಸ್ಥೆ ಇಲ್ಲ, ಅಲ್ಲಿ ಜನ ಖಾಸಗಿ ಬಸ್ಸು ಅಥವಾ ತಮ್ಮ ಖಾಸಗಿ ವಾಹನಗಳ ಮೇಲೆ ಅವಲಂಬನೆಯಾಗಿದ್ದಾರೆ. ಸರ್ಕಾರ ಎಲ್ಲಾ ಗ್ರಾಮಗಳಿಗೆ ಬಸ್ ಸೌಲಭ್ಯ ಕಲ್ಪಿಸಬೇಕು. ಸರ್ಕಾರದ ಈ ಯೋಜನೆ ಎಲ್ಲಾ ಮಹಿಳೆಯರಿಗೆ ಸಿಗಬೇಕು ಎಂದರೆ, ಮೊದಲು ಸರ್ಕಾರ ಹೆಚ್ಚುವರಿ ಬಸ್ಸುಗಳ ಸೌಕರ್ಯ ಕಲ್ಪಿಸಬೇಕು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು.  ಸರ್ಕಾರ ತನ್ನ ಯೋಜನೆಯನ್ನು ಎಲ್ಲಾ ಮಹಿಳೆಯರಿಗೆ ತಲುಪುವಂತೆ ಕ್ರಮಗಳನ್ನು ತೆಗೆದುಕೊಳ್ಳಬೇಕು.

 

ಕಿರಣ್ ಕುಮಾರ್ ಡಿ ದೊಗ್ಗನಹಳ್ಳಿ

ಫೋನ್ - 8310132859

Post a Comment

0 Comments